ಜಾಪವಿಧಿ ಮತ್ತು ಯೋಗ್ಯಜಾಪ ಮಂತ್ರ
ಚಿತ್ತವನ್ನು ಏಕಾಗ್ರಗೊಳಿಸಿ ಯಾವುದೇ ಮಂತ್ರವನ್ನು ೧೦೮ ಸಲ ಬೆರಳುಗಳ ಆಧಾರದಿಂದ ಅಥವಾ ಮಾಲೆ ಮುಂತಾದವುಗಳ ಆಧಾರದಿಂದ ಜಪ ಮಾಡುವುದು ಜಾಪಕೊಡುವುದೆಂದು ಹೇಳುತ್ತಾರೆ. ಯಾವ ಸಮಯ ಚಿತ್ತದಲ್ಲಿ ಏಕಾಗ್ರತೆಯಿದೆಯೋ, ಶರೀರದ ಶುದ್ಧಿ ಇದೆಯೋ ಆ ಸಮಯ ಗದ್ದಲದಿಂದ ದೂರಾಗಿ ಶಾಂತ ಸ್ಥಳದಲ್ಲಿ ಕುಳಿತುಕೊಂಡು ಮನಸ್ಸನ್ನು ಏಕಾಗ್ರಗೊಳಿಸಿ ಜಾಪ ಕೊಡಬೇಕು. ಇದು ಎರಡು ಪ್ರಕಾರವಾಗಿದೆ.
೧. ಅಂತರ್ಜಲ್ಪ
ಮಂತ್ರದ ಅರ್ಥ ತಿಳಿದುಕೊಂಡು ಆ ಪರಮೇಷ್ಠಿಗಳ ಗುಣಸ್ಮರಣೆ ಮಾಡುತ್ತಾ ಮನಸ್ಸಿನಲ್ಲಿ ಜಾಪ ಕೊಡುವುದು ಅಂತರ್ಜಲ್ಪವೆಂದು ಕರೆಯುತ್ತಾರೆ.
ಬಹಿರ್ಜಲ್ಪ
ಪರಮೇಷ್ಠಿಗಳ ಗುಣಸ್ಮರಣೆ ಸಹಿತ ಉಚ್ಚಾರಣಾಪೂರ್ವಕ ಮಂತ್ರದ ಜಾಪ ಕೊಡುವುದು ಬಹಿರ್ಜಲ್ಪವೆಂದು ಕರೆಯುತ್ತಾರೆ. ಈ ಎರಡೂ ಪ್ರಕಾರದ ಜಾಪದಲ್ಲಿ ಅಂತರ್ಜಲ್ಪವನ್ನು ಶ್ರೇಷ್ಠವೆಂದು ಹೇಳಲಾಗುತ್ತದೆ.
ಜಾಪ ಯೋಗ್ಯವಾದ ಮಂತ್ರಗಳು
೧. ೩೫ ಅಕ್ಷರಗಳುಳ್ಳ ಮಂತ್ರ – ಣಮೋಕಾರ ಮಂತ್ರ
೨. ೧೬ ಅಕ್ಷರಗಳುಳ್ಳ ಮಂತ್ರ – ಅರ್ಹತ್ಸಿದ್ಧಾಚಾರ್ಯೋಪಾಧ್ಯಾಯ ಸರ್ವ ಸಾಧುಭ್ಯೋ ನಮಃ
೩. ಆರು ಅಕ್ಷರಗಳುಳ್ಳ ಮಂತ್ರ – ಅರಹಂತಸಿದ್ಧ
೪. ಐದು ಅಕ್ಷರಗಳುಳ್ಳ ಮಂತ್ರ – ಅ, ಸಿ, ಆ, ಉ, ಸಾ
೫. ನಾಲ್ಕು ಅಕ್ಷರಗಳುಳ್ಳ ಮಂತ್ರ – ಅರಹಂತ ಅಥವಾ ಓಂ ಹ್ರೀಂ ನಮಃ
೬. ಮೂರು ಅಕ್ಷರಗಳುಳ್ಳ ಮಂತ್ರ – ಓಂ ನಮಃ
೭. ಎರಡು ಅಕ್ಷರಗಳುಳ್ಳ ಮಂತ್ರ – ಸಿದ್ಧ
೮. ಒಂದು ಅಕ್ಷರದ ಮಂತ್ರ – ಓಂ ಅಥವಾ ಹ್ರೀಂ
ಇದರ ಹೊರತಾಗಿ ಗುರುಗಳು ಹೇಳಿದ ಪ್ರಕಾರ ಬೇರೆ ಮಂತ್ರಗಳನ್ನು ಸಹ ಜಾಪ ಮಾಡಬಹುದಾಗಿದೆ. ಮನಃಪೂರ್ವಕವಾಗಿ ಜಾಪ ಮಾಡುವುದರಿಂದ ಮಹಾನ್ ಪುಣ್ಯದ ಬಂಧವಾಗುತ್ತದೆ. ಹಾಗೂ ಸಾಂಸಾರಿಕ ದುಃಖಗಳ ನಾಶ ಹಾಗೂ ಸುಖಗಳ ಪ್ರಾಪ್ತಿಯಾಗುತ್ತದೆ. ಎಲ್ಲ ಮಂತ್ರಗಳಲ್ಲಿ ಣಮೋಕಾರ ಮಂತ್ರವು ಸರ್ವಶ್ರೇಷ್ಠವೆಂದು ಹೇಳಲಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಣಮೋಕಾರ ಮಹಾಮಂತ್ರದ ಜಪವನ್ನು ದಿನಾಲು ೧೦೮ ಸಲ ಮಾಡಬೇಕಾಗುತ್ತದೆ.