ತತ್ತ್ವಗಳು

ತತ್ತ್ವಗಳು

ಸಂವರ ತತ್ತ್ವ

ಅಸ್ರವದ ನಿರೋಧ ಮಾಡುವುದು ಅಂದರೆ ಬರುವಂಥ ಕರ್ಮಗಳನ್ನು ತಡೆಯುವುದು ಸಂವರ ತತ್ತ್ವವಾಗಿದೆ. ಇನ್ನೊಂದು ಶಬ್ದದಲ್ಲಿ ಕರ್ಮಗಳನ್ನು ಬರಗೊಡದೇ ಇರುವುದು. ಸಂವರ ತ್ತ್ವವಾಗಿದೆ. ಯಾವ ಕಾರಣಗಳಿಂದ ಕರ್ಮದ ಅಸ್ರವವಾಗುತ್ತದೆಯೋ ಆ ಕಾರಣಗಳನ್ನು ದೂರ ಮಾಡಿದರೆ ಕರ್ಮಗಳ ಬರುವಿಕೆಯು ತಡೆಯುತ್ತದೆ. ಇದುವೇ ಸಂವರವಾಗಿದೆ. ಇದು ಎರಡು ಪ್ರಕಾರವಾಗಿದೆ.

೧. ಭಾವ ಸಂವರ

ಆತ್ಮನ ಯಾವ ಭಾವಗಳಿಂದ ( ವ್ರತ, ಸಂಯಮ, ಗುಪ್ತಿ, ಮುಂತಾದವು ) ಕರ್ಮಗಳ ‌ಬರುವಿಕೆಯು ನಿಲ್ಲುತ್ತದೆಯೋ ಅದು ಭಾವ ಸಂವರವಾಗಿದೆ.

೨. ದ್ರವ್ಯ ಸಂವರ

ಆತ್ಮನ ಯಾವ ಪರಿಣಾಮದಿಂದ ಪುದ್ಗಲ ಕರ್ಮಗಳು ಆತ್ಮನ ಕಡೆಗೆ ಆಕರ್ಷಣೆಯಾಗುವ ಶಕ್ತಿಯ ಕ್ಷಯವಾಗುವುದಕ್ಕೆ ದ್ರವ್ಯ ಸಂವರವೆನ್ನುತ್ತಾರೆ.

ಭಾವ ಸಂವರ ಮತ್ತು ದ್ರವ್ಯ ಸಂವರ ಎರಡೂ ಒಮ್ಮೇಲೆ ಒಂದೇ ಸಮಯದಲ್ಲಿ ಆಗುತ್ತವೆ. ಸಂವರೆಯಿಂದ ಮೋಕ್ಷಮಾರ್ಗವು ಪ್ರಶಸ್ತವಾಗುತ್ತದೆ.

ಸಂವರದ ಭೇದ

ಸಂವರದ ಭೇದಗಳು ೫೭ ಇರುತ್ತವೆ. ಅಂದರೆ ಇವುಗಳಿಂದ ಕರ್ಮಗಳು ಬರುವುದು ತಡೆಯುತ್ತದೆ. ಅವು ಕೆಳಗಿನಂತೆ

1. ಗುಪ್ತಿ ೩
2. ಸಮಿತಿ ೫
3. ಧರ್ಮ ೧೦
4. ಅನುಪ್ರೇಕ್ಷೆ ೧೨
5. ಪರೀಷಹ ಜಯ ೨೨
6. ಚಾರಿತ್ರ ೫

ಆತ್ಮ ಸ್ವರೂಪದಲ್ಲಿ ಸ್ಥಿರವಾಗುವುದು ಚಾರಿತ್ರವಿದೆ. ಇದು ೫ ಪ್ರಕಾರವಾಗಿದೆ.

ಸಂವರ ತತ್ವ

೫ ಚಾರಿತ್ರ

೧. ಸಾಮಾಯಿಕ ಚಾರಿತ್ರ

ಸಂಪೂರ್ಣ ಸಾವದ್ಯಯೋಗವನ್ನು ತ್ಯಾಗ ಮಾಡುವುದು ಎಲ್ಲ ಜೀವಗಳಲ್ಲಿ ಸಮತಾಭಾವವಿಡುವುದು , ಸುಖ ದುಃಖದಲ್ಲಿ ಸಮಾಧಾನವಾಗಿರುವುದು , ಶುಭ ಅಶುಭ ವಿಕಲ್ಪಗಳನ್ನು ತ್ಯಾಗ ಮಾಡುವುದು ಸಾಮಾಯಿಕ
ಚಾರಿತ್ರ್ಯವಾಗಿದೆ.

೨. ಛೇದೋಪಸ್ಥಾಪನಾ

ಪ್ರಮಾದವಶನಾಗಿ ವ್ರತಗಳಲ್ಲಿ‌ ದೋಷಗಳಾಗದಂತೆ ಪ್ರಾಯಶ್ಚತ್ತ ಮುಂತಾದವುಗಳ ಮೂಲಕ ಅದರ ಶೋಧನೆಯನ್ನು ಮಾಡಿ ಮತ್ತೆ ವ್ರತಗಳಲ್ಲಿ ಸ್ಥಿರಗೊಳ್ಳುವುದು ಛೇದೋಪಸ್ಥಾಪನಾ ಚಾರಿತ್ರವಾಗಿದೆ.

೩. ಪರಿಹಾರ ವಿಶುದ್ಧಿ ಚಾರಿತ್ರ

ಪ್ರಾಣಿ ಹಿಂಸೆಯಿಂದ ನಿವೃತ್ತಿಯಾಗುವುದಕ್ಕೆ ಪರಿಹಾರವೆಂದು ಅನ್ನುತ್ತಾರೆ. ರಾಗದ್ವೇಷದಿ ವಿಕಲ್ಪಗಳನ್ನು ತ್ಯಾಗ ಮಾಡಿ ಆತ್ಮನನ್ನು ಶುದ್ಧಗೊಳಿಸುವುದು ಪರಿಹಾರ ವಿಶುದ್ಧಿ ಚಾರಿತ್ರವಾಗಿದೆ.

೪. ಸೂಕ್ಷ್ಮ ಸಾಂಪರಾಯ ಚಾರಿತ್ರ

ಸೂಕ್ಷ್ಮ ಕಷಾಯವನ್ನು ಸೂಕ್ಷ್ಮಸಾಂಪರಾಯ ಎಂದು ಅನ್ನುತ್ತಾರೆ. ಆದ್ದರಿಂದ ಕೇವಲ ಸೂಕ್ಷ್ಮಲೋಭ ಕಷಾಯ ಮಾತ್ರ ಇರುವುದಕ್ಕೆ ಸೂಕ್ಷ್ಮ ಸಾಂಪರಾಯ ಚಾರಿತ್ರವೆಂದು ಕರೆಯುತ್ತಾರೆ.

೫. ಯಥಾಖ್ಯಾತ ಚಾರಿತ್ರ

ಸಮಸ್ತ ಮೋಹನೀಯ ಕರ್ಮ ಪ್ರಕೃತಿಗಳು ಕ್ಷೀಣವಾದ ಬಳಿಕ ಯಾವ ಸ್ವಾಭಾವಿಕ ಪೂರ್ಣ ವೀತರಾಗ ಚಾರಿತ್ರವು ಪ್ರಕಟವಾಗುತ್ತದೆಯೋ ಅದುವೇ ಯಥಾಖ್ಯಾತ ಚಾರಿತ್ರವಾಗಿರುತ್ತದೆ.

ತತ್ತ್ವಗಳು

ಸಂವರ ತತ್ವ

ಪ್ರತಿಯೊಂದು ಕರ್ಮವು ಆತ್ಮನ ಜೊತೆಗೆ‌ ಬಂಧವಾಗುವ ಸಮಯದಲ್ಲಿ ಅದರ ಯಾವ ಪ್ರಕೃತಿಯಾಗುತ್ತದೆಯೋ , ಅದರ ಅನುಸಾರವಾಗಿ ಆತ್ಮನಿಗೆ ಒಳ್ಳೆಯದು , ಕೆಟ್ಟದ್ದು ಫಲವನ್ನು ಕೊಟ್ಟು‌ ಕರ್ಮವು ಆತ್ಮನಿಂದ ದೂರ ಹೋಗುವುದಕ್ಕೆ ನಿರ್ಜರೆಯೆನ್ನುತ್ತಾರೆ. ಈ ಪ್ರಕಾರವಾಗಿ ಆತ್ಮ ಪ್ರದೇಶಗಳ ಜೊತೆಗೆ ಬಂಧಿಸಲ್ಪಟ್ಟ ಕರ್ಮಗಳು ಅಂಶರೂಪವಾಗಿ ಕ್ಷಯವಾಗುವುದಕ್ಕೆ ನಿರ್ಜರೆಯೆಂದು ಕರೆಯುತ್ತಾರೆ. ನಿರ್ಜರೆಯ ಕಾರಣದಲ್ಲಿ ಆತ್ಮನ ಯಾವ ಪರಿಣಾಮವಿರುತ್ತದೆಯೋ ಅದು ಭಾವ ನಿರ್ಜರೆಯಾಗಿರುತ್ತದೆ. ಮತ್ತು ಬಂಧಿಸಲ್ಪಟ್ಟ ಕರ್ಮಗಳು ಅಂಶಿಕವಾಗಿ ನಿರ್ಜರೆಯಾಗುವುದು ದ್ರವ್ಯ ನಿರ್ಜರೆಯಾಗಿರುತ್ತದೆ. ನಿರ್ಜರೆಯು ಎರಡು ಪ್ರಕಾರವಾಗಿದೆ.

೧. ಸವಿಪಾಕ ನಿರ್ಜರೆ

ಯೋಗ್ಯ ಕಾಲ ಎಂದರೆ ಕ್ರಮವಾಗಿ ಉದಯಕಾಲ ಬಂದ ಬಳಿಕ ಯಾವ ಕರ್ಮವು ಶುಭ ಅಶುಭ ಫಲವನ್ನು ಕೊಟ್ಟು ಬಿಡುಗಡೆಯಾಗುತ್ತದೆಯೋ ಅದು ಸವಿಪಾಕ ನಿರ್ಜರೆಯಾಗಿರುತ್ತದೆ. ಉದಾಹರಣೆಗೆ ಹಣ್ಣು ತಾನೇ ಪಕ್ವವಾದ ಬಳಿಕ ಟೊಂಗೆಯಿಂದ‌ ಉದುರಿ ಬೀಳುವುದು ಎಂದು ತಿಳಿಯಿರಿ. ಸಂಸಾರಿ ಪ್ರಾಣಿಗಳ ನಿರ್ಜರೆಯು ನಿರಂತರ ಇದೇ ರೀತಿಯಾಗಿ ಆಗುತ್ತಿರುತ್ತದೆ.

೨. ಅವಿಪಾಕ ನಿರ್ಜರೆ

ಬಂಧವಾಗಿರುವ ಕರ್ಮಗಳ ಉದಯಕಾಲ ಇನ್ನು ಬರದಿರುವಾಗ ತಪ ಮೊದಲಾದವುಗಳ ಉದಯದಲ್ಲಿ ತಂದು ಕ್ಷಯಗೊಳಿಸುವುದು ಅವಿಪಾಕ ನಿರ್ಜರೆಯಾಗಿದೆ. ಅಡಿ ಹಾಕಿದಾಗ ( ಉಷ್ಣತೆ ಕೊಟ್ಟು ) ಸಮಯದ ಮೊದಲೇ ಆ ಫಲಗಳು ಪಕ್ವವಾಗುತ್ತವೆ. ಅದೇ ಪ್ರಕಾರವಾಗಿ ಕರ್ಮಗಳನ್ನು ತಪ ಮುಂತಾದವುಗಳ ಮೂಲಕ ಸಮಯಕ್ಕಿಂತ ಮೊದಲೇ ಉದಯದಲ್ಲಿ ತಂದು ಕ್ಷಯಗೊಳಿಸಲಾಗುತ್ತದೆ. ಈ ಪ್ರಕಾರವಾಗಿ ಪರಿಪಕ್ವ ಕಾಲ ಬರುವ ಮೊದಲೇ ಕರ್ಮಗಳನ್ನು ನಾಶಗೊಳಿಸಲಾಗುತ್ತದೆ. ಇದುವೇ ಅವಿಪಾಕ ನಿರ್ಜರೆಯಾಗಿರುತ್ತದೆ. ಅವಿಪಾಕ ನಿರ್ಜರೆಯು ಸಮ್ಯಕ್ ದೃಷ್ಠಿ , ವ್ರತಧಾರಿ ಹಾಗೂ ಮುನಿರಾಜರಿಗೆ ಆಗುತ್ತದೆ. ಮೋಕಗಷಮಾರ್ಗದಲ್ಲಿ ಇದುವೇ ಉಪಯೋಗಿ ಇರುತ್ತದೆ.

ತತ್ತ್ವಗಳು

ಮೋಕ್ಷ ತತ್ವ

ಆತ್ಮನಿಂದ ಸಮಸ್ತ ಕರ್ಮಗಳು ಪೂರ್ಣ ರೂಪದಿಂದ ಕ್ಷಯವಾಗುವುದು ಅಂದರೆ ಆತ್ಮನು ಸಂಪೂರ್ಣ ಶುದ್ಧನಾಗುವುದು ಮೋಕ್ಷ ತತ್ವವಾಗಿದೆ. ಸಮಸ್ತ ಕರ್ಮಗಳಿಂದ ರಹಿತನಾಗಿ ಆತ್ಮನ ಸ್ವಾಭಾವಿಕ ಅನಂತಜ್ಞಾನ ಮುಂತಾದ ಗುಣ ಮತ್ತು ಅವ್ಯಾಬಾಧ ಸುಖರೂಪ ಅವಸ್ಥೆಯು ಉತ್ಪನ್ನವಾಗುತ್ತದೆ. ಇದರ ಹೆಸರು ಮೋಕ್ಷವಿರುತ್ತದೆ. ಇದರದೂ ಎರಡು ಭೇದಗಳಾಗುತ್ತವೆ.

1. ಭಾವ ಮೋಕ್ಷ

ಯಾವ ಭಾವನೆಗಳಿಂದ ಆತ್ಮನಲ್ಲಿರುವ ಸಂಪೂರ್ಣ ಕರ್ಮಗಳು ಬೇರೆಯಾಗಿ ಹೋಗುತ್ತವೆಯೋ ಅದುವೇ ಭಾವ ಮೋಕ್ಷವಾಗಿದೆ.

2. ದ್ರವ್ಯ ಮೋಕ್ಷ

ಆತ್ಮನಿಂದ ಸಂಪೂರ್ಣ ಕರ್ಮಗಳು ಬಿಡುಗಡೆಯಾಗುವುದೋ ಅದು ದ್ರವ್ಯ ಮೋಕ್ಷವಾಗಿದೆ.

ಕರ್ಮಗಳ ನಿರ್ಜರೆಯು ಆಗಾಗ ಆಗುತ್ತಲೇ ಇರುತ್ತದೆ. ಆದರೆ ಇದರಿಂದ ಮುಕ್ತಿ ಪ್ರಾಪ್ತವಾಗುವುದಿಲ್ಲ. ಇದರಿಂದ ಪ್ರತೀ ಸಮಯ ಹೊಸ ಹೊಸ ಕರ್ಮಗಳು ಆತ್ಮನಿಂದ ಬಂಧಿಸಲ್ಪಡುತ್ತಲೇ ಇರುತ್ತದೆ. ಆದ್ದರಿಂದ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಲು ನಿರ್ಜರೆಯೊಂದಿಗೆ ಸಂವರವು ಸಹ ಆಗುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಅಂದರೆ ಈ ಮೊದಲು ಬಂಧಿಸಲ್ಪಟ್ಟ ಕರ್ಮಗಳನ್ನು ಕ್ಷಯ ಮಾಡುವುದು ಮತ್ತು ಹೊಸ ಕರ್ಮಗಳು ಬರುವುದನ್ನು ತಡೆಯಬೇಕಾಗುವುದು.

ಹೇಯ, ಉಪಾದೇಯ , ಜ್ಞೇಯ ತತ್ವಗಳು

ಯಾವುದು ಬಿಡಲು ಯೋಗ್ಯವಾಗಿದೆಯೋ ಅದು ಹೇಯವಿರುತ್ತದೆ. ಯಾವುದು ಸ್ವೀಕರಿಸಲು ಯೋಗ್ಯವಿದೆಯೋ ಅದು ಉಪಾದೇಯವಿರುತ್ತದೆ. ಮತ್ತು ಯಾವುದು ತಿಳಿಯಲು ಯೋಗ್ಯವಿದೆಯೋ ಅದು ಜ್ಞೇಯವಿರುತ್ತದೆ. ಏಳು ತತ್ವಗಳಲ್ಲಿ ಅಸ್ರವ ಮತ್ತು ಬಂಧ ತತ್ವಗಳು ಹೇಯವಾಗಿವೆ. ಏಕೆಂದರೆ ಇವು ಸಂಸಾರ ಭ್ರಮಣ ಮಾಡಲು ಕಾರಣವಾಗಿರುತ್ತವೆ. ಸಂವರ ಮತ್ತು ನಿರ್ಜರೆ ತತ್ವಗಳು ಸಂಸಾರದಿಂದ ಮುಕ್ತನಾಗಲು ಕಾರಣವಾಗಿರುವುದರಿಂದ ಉಪಾದೇಯವಾಗಿರುತ್ತದೆ. ಜೀವ ಮತ್ತು ಅಜೀವ ತತ್ವಗಳು ಜ್ಞೇಯವಿರುತ್ತದೆ. ಮತ್ತು ಮೋಕ್ಷ ತತ್ವವು ಪರಮ ಉಪಾದೇಯವಿರುತ್ತದೆ.

Translate »
error: Content is protected !!