ಜೈನರ ದೀಪಾವಳಿ

ಜೈನರು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುವರು. ಹೀಗೆ ಆಚರಿಸಲು ಅದಕ್ಕೆ ಸ್ಪಷ್ಟ ಕಾರಣವೂ ಉಂಟು.

24 ತೀರ್ಥಂಕರರಲ್ಲಿ ಕೊನೆಯವರಾದ ಭ|ಮಹಾವೀರ ಸ್ವಾಮಿಯು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುದರ್ಶಿಯ ರಾತ್ರಿಯ ವಿನಾಶದಲ್ಲಿ(ಬೆಳಗ್ಗಿನ ಜಾವದಲ್ಲಿ) ತನ್ನ ಅಘಾತಿ ಕರ್ಮಗಳನ್ನು ನಾಶ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಂಡರು .ಪ್ರಭುವಿನ ನಿರ್ವಾಣದ ಸಮಾಚಾರವನ್ನು ಕೇಳಿದ ದೇವತೆಗಳು ,ಬಂದು ಮಹೋತ್ಸವವನ್ನು ಆಚರಿಸಿದರು.ನಿರ್ವಾಣ ಭೂಮಿ ಪಾವಾಪುರಿಯಲ್ಲಿ ಅಷ್ಟವಿಧಾರ್ಚನೆ ಮಾಡಿದರು,ದೀಪ ಬೆಳಗಿದರು. ದಕ್ಷಿಣ ಕನ್ನಡದಲ್ಲಿ ಜೈನ ಶ್ರಾವಕ -ಶ್ರಾವಕಿಯರು ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ಬಸದಿಯಲ್ಲಿ ದೀಪ ಹಚ್ಚಿ ಅರ್ಘ್ಯ ಕೊಡುವ ಪದ್ಧತಿ ಉಂಟು ..ಸಾಕ್ಷಾತ್ ತೀರ್ಥಂಕರರ ನಿರ್ವಾಣ ಭೂಮಿಯೇ ಆದ ಹಾಗೆ ಭಾಸವಾಗುತ್ತದೆ.

ಮಹಾವೀರ ಸ್ವಾಮಿಯ ಕೇವಲಜ್ಞಾನದ ಪ್ರಕಾಶದಿಂದ ಲಕ್ಷಾಂತರ ಮಂದಿ ಭವಸಾಗರವನ್ನು ದಾಟಿದರು ,ದಾಟುವ ಮಾರ್ಗವನ್ನು ತಿಳಿದರು.ಅವರು ಹೋದಾಗ ಅಮವಾಸ್ಯೆಯ ರಾತ್ರಿಯೂ ಕೂಡ ಪ್ರಕಾಶವಾಯಿತು…ಅದೇ ದಿವಸ ಸಾಯಂಕಾಲ ಅವರ ಪ್ರಮುಖ ಶಿಷ್ಯರಾದ ಇಂದ್ರಭೂತಿ ಗಣಧರರಿಗೆ ಕೇವಲಜ್ಞಾನ ಆಯಿತು.. ಹಾಗಾಗಿ ಆ ದಿನವು ದ್ವಿಗುಣಿತ ಮಹಿಮಾವಂತನೆನಿಸಿತು‌. ಜ್ಞಾನದ ಬೆಳಕು ಅನೇಕ ಜೀವಿಗಳ ಕಲ್ಯಾಣ ಮಾಡುವ ಮೋಕ್ಷ ಮಾರ್ಗಕ್ಕೆ ದಾರಿ ದೀಪವಾಯಿತು.

2543ವರ್ಷಗಳಿಂದ ಇಲ್ಲಿಯವರೆಗೆ ಆ ಒಂದು ಕಾರ್ತಿಕ ಅಮಾವಾಸ್ಯೆಯೇ ಕಪ್ಪಾಗಿದ್ದು ಬೆಳಗುತ್ತಿದೆ.ಪ್ರಕಾಶಮಯವಾಗುತ್ತಿದೆ. ಜೈನಧರ್ಮೀಯರು ಈ ಮಹಾಪರ್ವವನ್ನು ಭಗವಾನ್ ಮಹಾವೀರ ನಿರ್ವಾಣೋತ್ಸವವನ್ನಾಗಿಯೂ ಮತ್ತು ಗೌತಮ ಗಣಧರರ ಕೇವಲಜ್ಞಾನಕಲ್ಯಾಣಮಹೋತ್ಸವವನ್ನಾಗಿಯೂ ಆಚಾರಿಸುವರು. ಅಜ್ಞಾನದ ನಿವಾರಣೆ ಆಗಿ ಜ್ಞಾನ ಪ್ರಕಾಶಿಸಲಿ ಅಂತ ದೀಪ ಹಚ್ಚಿ ದೀಪಾವಳಿಯನ್ನು ಆಚರಿಸುವರು🙏🏻👍🏻.

ವರ್ಧತಾಂಜಿನಶಾಸನಮ್

✍ಅಜಿತ್ ಜೈನ್ ನಾರಾವಿ

Translate »
error: Content is protected !!