ಜೀವದಯಾಷ್ಟಮಿ

ಇವತ್ತು ಜೀವದಯಾಷ್ಟಮಿ.  ಜೈನರಿಗೆ ಇದು ನಿತ್ಯ ಜೀವದಯಾ ಅಷ್ಟಮಿಯೂ ಹೌದು. ಜೈನರು ಶ್ರಾವಕ ಅವಸ್ಥೆಯಲ್ಲಿ ಅಹಿಂಸೆಯನ್ನು ಅಣು ರೂಪದಲ್ಲಿ ಯತಿ ಅವಸ್ಥೆಯಲ್ಲಿ ಅಹಿಂಸೆಯನ್ನು ಮಹಾವ್ರತರೂಪದಲ್ಲಿ ಆಚರಿಸುವರು. ಯಾವಾಗ ಸಮಾಜದಲ್ಲಿ ನವರಾತ್ರಿಯ ಅಷ್ಟಮಿಯ ದಿವಸ ಪ್ರಾಣಿ ಬಲಿ ಕೊಡುವ ಪದ್ದತಿ ಶುರುವಾಯಿತೋ ಆವಾಗ ನಿರಪರಾಧಿ ಪಶುಗಳು ಬಲಿಯಾದವು ಹಿಂಸೆಯು ತನ್ನ ಪರಾಕಾಷ್ಟತೆಯನ್ನು ತಲುಪಿತು. ಇದಕ್ಕೆ ವ್ಯತಿರಿಕ್ತವಾಗಿ ನಿರಪರಾಧಿ ಪ್ರಾಣಿಗಳಿಗೆ ಸಂರಕ್ಷಣೆ ದೊರೆಯಲು ‘ಜೀವದಯಾಷ್ಟಮಿ’ ಆಚರಣೆಯನ್ನು ರೂಢಿಯಲ್ಲಿ ತಂದು ಅಹಿಂಸಾತತ್ವದ ಪ್ರತಿಪಾದನೆಯನ್ನು ಸಕಾಲದಲ್ಲಿ ಮಾಡಿ ,ಎಚ್ಚರವನ್ನೀಯುವಲ್ಲಿ ಜೈನ ಆಚಾರ್ಯರು ವಿಶೇಷ ಕಾಣಿಕೆ ಸಲ್ಲಿಸಿದ್ದಾರೆ. ಹಿಂಸೆಯ ಪ್ರಾಬಲ್ಯ ಹೆಚ್ಚಾಗಬಹುದಾದ ಅಷ್ಟಮಿಯ ದಿನವನ್ನೇ ‘ಜೀವದಯಾಷ್ಟಮಿ’ಯಾಗಿ ಪರಿವರ್ತಿಸಿ ಅದನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ತುಂಬ ವೈಶಿಷ್ಟ್ಯವಿದೆ.

ಅಹಿಂಸೆಯೇ ಪರಮ ಧರ್ಮ

✍ಅಜಿತ್ ಕುಮಾರ್ ಜೈನ್ ನಾರಾವಿ

Translate »
error: Content is protected !!