ಯಾವ ಕೆಲವು ಮಾತುಗಳನ್ನು ಆಡಲಾಗುತ್ತದೆಯೋ ಅದು ಕೆಲವು ಅಪೇಕ್ಷೆಯ ಸಲುವಾಗಿಯೇ ಆಗುತ್ತದೆ. ಅಲ್ಲಿ ಯಾವ ಅಪೇಕ್ಷೆಯಿದೆಯೋ ಅದುವೇ ನಯವಿರುತ್ತದೆ. ಪ್ರಮಾಣದ ಮೂಲಕ ಗ್ರಹಣ ಮಾಡಿದ ವಸ್ತುವಿನ ಒಂದು ಧರ್ಮ ಅಂದರೆ ಅಂಶವನ್ನು ಗ್ರಹಣ ಮಾಡಿಸುವ ಜ್ಞಾನವನ್ನು ನಯವೆನ್ನುತ್ತಾರೆ. ಅಥವಾ ವಕ್ತಾರನ ಅಭಿಪ್ರಾಯಕ್ಕೆ ನಯವೆಂದು ಹೇಳುತ್ತಾರೆ. ವಸ್ತುಗಳಲ್ಲಿ ಅನಂತ ಗುಣವಿರುವುದರಿಂದ ವಸ್ತುವಿನ ಸ್ವರೂಪದ ಸಮಗ್ರ ಕಥನವು ಒಮ್ಮೆಲೆ ಮಾಡುವುದು ಅತ್ಯಂತ ಕಠಿಣವಿದೆ. ಒಂದು ವೇಳೆ ಆ ವಸ್ತುವನ್ನು ತಿಳಿದುಕೊಂಡರೂ ಹೇಳಲು ಸಾಧ್ಯವಾಗುವುದಿಲ್ಲ. ಅದನ್ನು ಹೇಳುವ ಸಲುವಾಗಿ ಆ ವಸ್ತುವಿನ ಗುಣಗಳ ವಿಶ್ಲೇಷಣೆ ಮಾಡಿ ಅದರ ಒಂದೊಂದು ಗುಣವನ್ನು ಹೇಳುವುದೇ ಸಾರ್ಥಕ ಉಪಾಯವಿದೆ. ಇಂತಹ ಸ್ಥಿತಿಯಲ್ಲಿ ಯಾವಾಗ ವಕ್ತಾರನು ವಸ್ತುವಿನ ಒಂದು ಗುಣವನ್ನು ಮುಖ್ಯಮಾಡಿ ಮತ್ತು ಉಳಿದ ಗುಣಗಳನ್ನು ಗೌಣ ಮಾಡಿ ಕಥನ ಮಾಡುತ್ತಾನೆಯೋ ಆಗ ಆ ವಸ್ತುವನ್ನು ಪೂರ್ಣವಾಗಿ ತಿಳಿಯುವುದು ಸುಲಭವಾಗುತ್ತದೆ. ನಯದ ಕಾರ್ಯ ಇದೇ ಆಗಿರುತ್ತದೆ. ಈ ಪ್ರಕಾರವಾಗಿ ಅನಂತ ಗುಣವುಳ್ಳ ವಸ್ತುವಿನ ಒಂದು ಅಂಶವನ್ನು ಹೇಳುವಂಥ ಕಥನವು ನಯ ಇರುತ್ತದೆ. ವಸ್ತುವಿನ ಸಂಪೂರ್ಣ ಜ್ಞಾನವಾಗುವುದು ಪ್ರಮಾಣವಾಗಿದೆ. ಮತ್ತು ಅದರದೇ ಅಂಶರೂಪ ಜ್ಞಾನವಾಗುವುದು ನಯವಾಗಿದೆಯೆಂದು ಹೇಳುತ್ತಾರೆ.
ನಯದ ಭೇದಗಳು
ಆಗಮದಲ್ಲಿ ನಯದ ಅನೇಕ ಭೇದ ಪ್ರಭೇದಗಳನ್ನು ಹೇಳಲಾಗಿದೆ. ಆದರೂ ಸಹ ಆಧ್ಯಾತ್ಮಿಕ ಭಾಷೆಯಲ್ಲಿ ಇದರ ಎರಡು ಮೂಲ ಭೇದಗಳಿವೆ.
೧. ನಿಶ್ಚಯ ನಯ
ಯಾವುದು ವಸ್ತುವಿನ ಶುದ್ಧ ಸ್ವರೂಪವನ್ನು ಹೇಳುತ್ತದೆಯೋ ಮತ್ತು ಸ್ವಾಶ್ರೀತ ಕಥನ ಮಾಡುತ್ತದೆಯೋ ಅದು ನಿಶ್ಚಯ ನಯವಾಗಿದೆ. ಉದಾಹರಣೆಗೆ ನನ್ನ ಆತ್ಮನು ಸಿದ್ಧ ಭಗವಾನರ ಸಮಾನ ಇದ್ದಾನೆ, ಅಥವಾ ಕೇವಲ ಜ್ಞಾನವು ಜೀವದ ಸ್ವಭಾವಭೂತ ಲಕ್ಷಣವಿರುತ್ತದೆ.
೨. ವ್ಯವಹಾರ ನಯ
ಯಾವುದು ವಸ್ತುವಿನ ಅಶುದ್ಧ ಸ್ವರೂಪವನ್ನು ಹೇಳುತ್ತದೆಯೋ ಮತ್ತು ಪರಾಶ್ರಿತ ಕಥನ ಮಾಡುತ್ತದೆಯೋ ಅದು ವ್ಯವಹಾರ ನಯವಿರುತ್ತದೆ. ಉದಾಹರಣೆಗೆ ನಾನು ಮನುಷ್ಯನಿದ್ದೇನೆ.
ನಯದ ಮೂಲ ಭೇದಗಳು
೧. ದ್ರವ್ಯಾರ್ಥಿಕ ನಯ
೨. ಪರ್ಯಾಯಾರ್ಥಿಕ ನಯ
ದ್ರವ್ಯಾರ್ಥಿಕ ನಯ
ಯಾವುದು ಪರ್ಯಾಯವನ್ನು ಗೌಣ ಮಾಡಿ ದ್ರವ್ಯ ಸಾಮಾನ್ಯವನ್ನು ವಿಷಯವನ್ನಾಗಿ ಮಾಡುತ್ತದೆಯೋ ಅದು ದ್ರವ್ಯಾರ್ಥಿಕ ನಯವಾಗಿದೆ. ಉದಾಹರಣೆಗೆ ಗಿಡ, ಪಶು, ಮನುಷ್ಯ ಮುಂತಾದವು ಬೇರೆ ಬೇರೆ ರೂಪಗಳಲ್ಲಿ ಇರುವಂಥ ಜೀವ ಸಾಮಾನ್ಯಕ್ಕೆ ಜೀವ ದ್ರವ್ಯವೆಂದು ಹೇಳುವುದು.
ಪರ್ಯಾಯಾರ್ಥಿಕ ನಯ
ಯಾವುದು ದ್ರವ್ಯವನ್ನೇ ಗೌಣ ಮಾಡಿ ಪರ್ಯಾಯ ವಿಶೇಷವನ್ನು ವಿಷಯವನ್ನಾಗಿ ಮಾಡುತ್ತದೆಯೋ ಅದು ಪರ್ಯಾಯಾರ್ಥಿಕ ನಯವಾಗಿದೆ. ಉದಾಹರಣೆಗೆ ಕುಂಡಲ ತೆಗೆದುಕೊಂಡು ಬಾ ಎಂದು ಹೇಳಿದಾಗ ಅವನು ಬಳೆ, ಹಾರ, ಉಂಗುರ ಮುಂತಾದವುಗಳನ್ನು ತೆಗೆದುಕೊಂಡು ಬಾರದೇ ಕೇವಲ ಕುಂಡಲವನ್ನೇ ತರುತ್ತಾನೆ. ಎಲ್ಲ ಲೋಕ ವ್ಯವಹಾರವು ಇದೇ ನಯದ ದೃಷ್ಟಿಯಿಂದ ನಡೆಯುತ್ತದೆ.
ಏಳು ಪ್ರಕಾರದ ನಯ
ಆಚಾರ್ಯ ಉಮಾ ಸ್ವಾಮಿಗಳು ತತ್ವಾರ್ಥ ಸೂತ್ರದಲ್ಲಿ ಏಳು ಪ್ರಕಾರದ ನಯಗಳ ಉಲ್ಲೇಖ ಮಾಡಿದ್ದಾರೆ. ಅವು ಕೆಳಗಿನಂತೆ ಇವೆ.
೧. ನೈಗಮ ನಯ
೨. ಸಂಗ್ರಹ ನಯ
೩. ವ್ಯವಹಾರ ನಯ
೪. ಋಜುಸೂತ್ರ ನಯ
೫. ಶಬ್ದ ನಯ
೬. ಸಮಭಿರೂಢ ನಯ
೭. ಏವಂಭೂತ ನಯ
ನೈಗಮ ನಯ
ನೈಗಮ ಅರ್ಥವು ಸಂಕಲ್ಪ ಎಂದಾಗುತ್ತದೆ. ಭವಿಷ್ಯದಲ್ಲಿ ಉತ್ಪನ್ನವಾಗುವಂಥ ಪದಾರ್ಥದಲ್ಲಿ ಯಾವ ಸಂಕಲ್ಪವನ್ನು ಗ್ರಹಣ ಮಾಡುತ್ತಾರೆಯೋ ಅದನ್ನು ನೈಗಮ ನಯ ಎನ್ನುತ್ತಾರೆ. ಉದಾಹರಣೆಗೆ ಒಲೆ ಉರಿಸುತ್ತಿರುವವಳನ್ನು ಕೇಳಿದ ಕೂಡಲೇ ಅವಳು ನಾನು ಅಡಿಗೆ ಮಾಡುತ್ತೇನೆ ಎಂದು ಹೇಳುತ್ತಾಳೆ. ನಿಜವಾಗಿಯೂ ಅವಳು ಆಗ ಅಡಿಗೆ ಮಾಡುತ್ತಿರಲಿಲ್ಲ. ಅಡಿಗೆ ಇನ್ನು ಮುಂದೆ ಮಾಡುವವಳಿದ್ದಾಳೆ. ಆದ್ದರಿಂದ ಲೋಕ ವ್ಯವಹಾರದಲ್ಲಿ ಅವಳ ಉತ್ತರವು ಸತ್ಯವೆಂದು ಮನ್ನಿಸಲಾಗುತ್ತದೆ. ಈ ಪ್ರಕಾರ ಎಷ್ಟು ಲೋಕ ವ್ಯವಹಾರ ಇವೆಯೋ, ಅವೆಲ್ಲವೂ ನೈಗಮ ನಯದ ವಿಚಾರವಾಗಿದೆ.
ಸಂಗ್ರಹ ನಯ
ಸಮಸ್ತ ಸಮಾನ ವಸ್ತುಗಳನ್ನು ಸಂಗ್ರಹ ಮಾಡಿ ಯಾವ ಕಥನ ಮಾಡಲಾಗುತ್ತದೆಯೋ ಅದು ಸಂಗ್ರಹ ನಯವಾಗಿದೆ. ಇದರಲ್ಲಿ ಪರ್ಯಾಯಗಳ ಅಪೇಕ್ಷೆಯನ್ನು ಮಾಡದೇ ವಸ್ತುವನ್ನು ಸಾಮಾನ್ಯ ರೂಪದಿಂದ ಗ್ರಹಣ ಮಾಡಲಾಗುತ್ತದೆ. ಉದಾಹರಣೆಗೆ ನಾರಕಿ, ಮನುಷ್ಯ, ತೀರ್ಯಂಚ ಮುಂತಾದ ಎಲ್ಲವೂಗಳನ್ನು ಕೂಡ ಒಂದೇ ಜೀವ ಶಬ್ದದ ಮೂಲಕ ಸಂಗ್ರಹವಾಗುತ್ತದೆ.
ನಯದ ಏಳು ಪ್ರಕಾರಗಳು
ವ್ಯವಹಾರ ನಯ
ಸಂಗ್ರಹ ನಯದ ಮೂಲಕ ಗ್ರಹಣ ಮಾಡಲಾದ ಪದಾರ್ಥಗಳನ್ನು ವಿಧಿಪೂರ್ವಕ ಭೇದ ಮಾಡುವುದು ವ್ಯವಹಾರ ನಯವಾಗಿದೆ. ಸಂಗ್ರಹ ನಯದ ವಿಷಯ ಭೂತ ಜೀವದಲ್ಲಿ ದೇವ, ಮನುಷ್ಯ, ನಾರಕಿ, ತೀರ್ಯಂಚ, ಸ್ಥಾವರ ಮುಂತಾದ ಜೀವಗಳ ಭೇದ ಮಾಡುವುದು.
ಋಜುಸೂತ್ರ ನಯ
ಯಾವ ವಸ್ತು ಕೇವಲ ವರ್ತಮಾನ ಕಾಲಸಂಬಂಧಿ ಪರ್ಯಾಯವನ್ನು ಗ್ರಹಣ ಮಾಡುತ್ತದೆಯೋ ಅದು ಋಜುಸೂತ್ರ ನಯವಾಗಿದೆ. ಉದಾಹರಣೆಗೆ ಮನುಷ್ಯ ಪರ್ಯಾಯದ ಒಂದು ಸಮಯವರ್ತಿ ಪರ್ಯಾಯದ ಗ್ರಹಣ ಮಾಡುವುದು.
ಶಬ್ದ ನಯ
ಶಬ್ದದ ಮಾಧ್ಯಮದಿಂದ ಅರ್ಥದ ಬೋಧ ಮಾಡುವುದಕ್ಕೆ ಶಬ್ದ ನಯವೆಂದು ಕರೆಯುತ್ತಾರೆ. ಪರ್ಯಾಯವಾಚಿ ಬೇರೆ ಬೇರೆ ಶಬ್ದಗಳ ಪ್ರಯೋಗವಾದ ಬಳಿಕ ಒಂದೇ ಅರ್ಥದ ಕಥನವು ಈ ನಯದಲ್ಲಿ ಮಾಡಲಾಗುತ್ತದೆ. ಉದಾಹರಣೆಗೆ ಮುನಿ, ಸಾಧು, ತಪಸ್ವಿ ಮುಂತಾದ ಪರ್ಯಾಯವಾಚಿ ಶಬ್ದಗಳ ಒಂದೇ ಅರ್ಥ ಆಗುತ್ತದೆ.
ಏಳು ಪ್ರಕಾರದ ನಯ
ಸಮಭಿರೂಢ ನಯ
ಯಾವ ಶಬ್ದವು ಯಾವ ಅರ್ಥ ಅಥವಾ ಪದಾರ್ಥದ ಸಲುವಾಗಿ ಪ್ರಸಿದ್ಧವಿದೆಯೋ ಆ ಶಬ್ದವು ಪ್ರತಿಯೊಂದು ಅವಸ್ಥೆಯಲ್ಲಿಯೂ ಅದೇ ಅರ್ಥ ಅಥವಾ ಪದಾರ್ಥದ ವಾಚಕ ಆಗುವುದು. ಉದಾಹರಣೆಗೆ ಗೌ ( ಹಿಂದಿ ) ಶಬ್ದದ ಅರ್ಥಗಳು ವಾಣಿ, ಪೃಥ್ವಿ ಮುಂತಾಗಿ ಅನೇಕ ಇವೆ. ಆದರೆ ಈ ಆಕಳು ಪಶುವಿನ ಸಲುವಾಗಿ ಪ್ರಸಿದ್ಧವಿದೆ. ಆದ್ದರಿಂದ ಈ ನಯವು ಈ ಅರ್ಥ ( ಆಕಳು ) ವನ್ನೇ ಗ್ರಹಣ ಮಾಡುತ್ತದೆ.
ಏವಂಭೂತ ನಯ
ಯಾವ ವಸ್ತು ಯಾವ ಪರ್ಯಾಯ ಅಥವಾ ಕ್ರಿಯೆಗೆ ಪ್ರಾಪ್ತವಾಗಿದೆಯೋ , ಅದೇ ರೂಪವನ್ನು ನಿಶ್ಚಯ ಮಾಡುವ ಅಥವಾ ಹೆಸರು ನಯಕ್ಕೆ ಏವಂಭೂತ ನಯವೆಂದು ಕರೆಯುತ್ತಾರೆ. ಉದಾಹರಣೆಗೆ ಪೂಜೆ ಮಾಡುವಾಗ ಆ ವ್ಯಕ್ತಿಗೆ ಪೂಜಾರಿ ಎಂದು ಕರೆಯುತ್ತಾರೆ. ಆದರೆ ಅವನು ವ್ಯಾಪಾರ ಮಾಡುವಾಗ ಅವನನ್ನು ವ್ಯಾಪಾರಿಯೆಂದು ಕರೆಯುತ್ತಾರೆ. ಆಗ ಪೂಜಾರಿ ಅನ್ನುವುದಿಲ್ಲ.
ಈ ಎಲ್ಲಾ ನಯಗಳು ಅಪೇಕ್ಷಾ ಸಹಿತ ವರ್ಣನೆ ಮಾಡುತ್ತವೆ. ಇವುಗಳಲ್ಲಿಂದ ಯಾವುದೇ ಒಂದು ನಯದ ಆಶ್ರಯ ತೆಗೆದುಕೊಳ್ಳುವ ವ್ಯಕ್ತಿಯು ತನ್ನ ಕಲ್ಯಾಣ ಮಾಡಿಕೊಳ್ಳುವುದಿಲ್ಲ. ತತ್ವ ಬೋಧದ ಸಲುವಾಗಿ ನಯಗಳ ಸಮ್ಯಕ್ ಅಂದರೆ ಅಪೇಕ್ಷಾ ಸಹಿತ ಅವಲಂಬನೆಯನ್ನು ತೆಗೆದುಕೊಳ್ಳಬೇಕು…