ಆತ್ಮ
ಜ್ಞಾನ ಸ್ವಭಾವಿ ಜೀವಗಳು ತತ್ವಕ್ಕೇನೇ ಆತ್ಮನೆಂದು ಹೇಳುತ್ತಾರೆ. ಶುದ್ಧ ಚೈತನ್ಯ ಲಕ್ಷಣಧಾರಕನು ಆತ್ಮನಿದ್ದಾನೆ. ಆತ್ಮನ ಸ್ವಭಾವವು ತಿಳಿಯುವುದು ನೋಡುವುದಾಗಿದೆ. ಆತ್ಮನಲ್ಲಿ ಅನಂತಜ್ಞಾನ, ಅನಂತದರ್ಶನ ಅನೇಕ ಗುಣಗಳು ತುಂಬಿಕೊಂಡಿವೆ.
ಶರೀರ ಮತ್ತು ಆತ್ಮ ಬೇರೆ ಬೇರೆ ಇವೆ
ಆತ್ಮ ಮತ್ತು ಶರೀರಗಳು ಬೇರೆ ಬೇರೆ ಇವೆ. ಆತ್ಮನು ನಮಗೆ ಕಾಣಿಸುವುದಿಲ್ಲ. ಆದರೆ ಅನುಭವ ಮಾಡಬಹುದಾಗಿದೆ. ಹೇಗೆ ಹಾಲು ಮತ್ತು ನೀರು ಕೂಡಿ ಒಂದಾಗುತ್ತದೆಯೋ ಅದೇ ಪ್ರಕಾರ ಆತ್ಮ ಹಾಗೂ ಶರೀರಗಳು ಸಹ ಕೂಡಿಕೊಂಡು ಒಂದಾಗುತ್ತಲಿವೆ. ಆದರೆ ಶರೀರಕ್ಕೆ ಆತ್ಮನಿಂದ ಬೇರೆಯಾಗಿ ತಿಳಿಯಬಹುದಾಗಿದೆ. ಸತ್ತ ಶರೀರವು ಕೇವಲ ಶರೀರವಾಗಿರುತ್ತದೆ. ಮತ್ತು ಅದರಿಂದ ಆತ್ಮನು ಬೇರೆಯಾಗಿ ಬಿಟ್ಟಿರುತ್ತಾನೆ. ಈ ಪ್ರಕಾರ ಈ ಅನುಭವವನ್ನು ಮಾಡಬಹುದಾಗಿದೆ. ಅಂದರೆ ಶರೀರ ಮತ್ತು ಆತ್ಮಗಳು ಬೇರೆ ಬೇರೆಯಾಗಿವೆ.
ಶರೀರವು ಜನ್ಮ, ಮರಣ ಮತ್ತು ಮುಪ್ಪುಗಳಿಗೆ ಪ್ರಾಪ್ತವಾಗುತ್ತವೆ. ಆತ್ಮನಾಗುವುದಿಲ್ಲ. ಆತ್ಮನು ಸಾಯುವುದಿಲ್ಲ ಮತ್ತು ಜನ್ಮ ಪಡೆಯುವುದಿಲ್ಲ. ಮುಪ್ಪಿನವನೂ ಆಗುವುದಿಲ್ಲ. ಯಾವಾಗ ಈ ಪ್ರಕಾರ ದೃಢ ಶ್ರದ್ಧಾನ ಜೀವಕ್ಕೆ ಆಗುವುದೋ ಆಗ ಅದು ಶರೀರದಿಂದ ಪ್ರೀತಿಯನ್ನು ಕಡಿಮೆ ಮಾಡಿ ಮತ್ತು ತಪ ಮುಂತಾದವುಗಳನ್ನು ಧಾರಣ ಮಾಡಿ ತಮ್ಮ ಕರ್ಮಗಳ ಕ್ಷಯ ಮಾಡಿ ಮೋಕ್ಷವನ್ನು ಪ್ರಾಪ್ತ ಮಾಡಿಕೊಳ್ಳುತ್ತಾನೆ.
ಆತ್ಮನ ೩ ಅವಸ್ಥೆಗಳು
ಪ್ರತಿಯೊಂದು ಜೀವದಲ್ಲಿ ಆತ್ಮನಿರುತ್ತಾನೆ. ಅವನ ಮೂರು ಅವಸ್ಥೆಗಳು ಆಗುತ್ತವೆ. ಅಂದರೆ ಅವಸ್ಥೆಯ ಅಪೇಕ್ಷೆಯಿಂದ ಆತ್ಮನು ೩ ಪ್ರಕಾರವಾಗಿ ಆಗುತ್ತಾನೆ.
೧. ಬಹಿರಾತ್ಮಾ
೨. ಅಂತರಾತ್ಮಾ ( ಮಹಾತ್ಮಾ )
೩. ಪರಮಾತ್ಮಾ
ಅಂತರಾತ್ಮ ( ಬಹಿರಾತ್ಮ )
ತತ್ವಗಳ ಮೇಲೆ ಶ್ರದ್ಧೆಯನ್ನು ಮಾಡುವಂಥ ಸಮ್ಯಗ್ದೃಷ್ಟಿ ಜೀವವು , ಆತ್ಮ ಹಾಗೂ ಶರೀರವನ್ನು ಬೇರೆ ಬೇರೆಯೆಂದು ತಿಳಿಯುತ್ತಾನೆ. ಇವನು ಅಂತರಾತ್ಮನಿದ್ದಾನೆ. ಶರೀರದ ನಾಶವಾಗುತ್ತದೆ, ಆತ್ಮನ ನಾಶವಾಗುವುದಿಲ್ಲ ಎಂದು ಇವನು ತಿಳಿಯುತ್ತಾನೆ. ಇವನ ಲಕ್ಷ್ಯವು ಬಾಹ್ಯ ಪದಾರ್ಥಗಳಿಂದ ದೂರವಾಗಿ ಆತ್ಮನ ಕಡೆಗೆ ಹೊರಳಿರುತ್ತದೆ. ಒಂದು ವೇಳೆ ಇವನು ಮನೆಯಲ್ಲಿದ್ದರೂ ಉದಾಸೀನ ರೂಪದಿಂದ ಕಾರ್ಯಗಳನ್ನು ಮಾಡುತ್ತಾನೆ. ಮತ್ತು ಯಾವಾಗ ನಾನು ಮನೆಮಾರು ಬಿಟ್ಟು ದೂರಹೋಗಿ ಆತ್ಮಸಾಧನೆ ಮಾಡುವ ಸಮಯ ಬರುವುದೋ ಎಂದು ಸತತ ಇಚ್ಛೆ ಮಾಡುತ್ತಿರುತ್ತಾನೆ.
ಉತ್ತಮ ಅಂತರಾತ್ಮ
ಅಂತರಂಗ ಮತ್ತು ಬಹಿರಂಗ ಪರಿಗ್ರಹದಿಂದ ರಹಿತನಾದ ಶುದ್ಧೋಪಯೋಗಿ ಮುನಿರಾಜರು ಉತ್ತಮ ಅಂತರಾತ್ಮರಾಗಿದ್ದಾರೆ.
ಮಧ್ಯಮ ಅಂತರಾತ್ಮ
೬ ನೆಯ ಗುಣಸ್ಥಾನವರ್ತಿ ಮುನಿ ಮತ್ತು ದೇಶ ವ್ರತಿ ಶ್ರಾವಕ ( ಐಲಕ, ಕ್ಷುಲ್ಲಕ , ಬ್ರಹ್ಮಚಾರಿ ಮುಂತಾದವರು ) ಮಧ್ಯಮ ಅಂತರಾತ್ಮರಿದ್ದಾರೆ.
ಜಘನ್ಯ ಅಂತರಾತ್ಮ
ಅವಿರತ ಸಮ್ಯಕ್ ದೃಷ್ಟಿ ಶ್ರಾವಕನು ವ್ರತಗಳಿಂದ ರಹಿತನಿರುತ್ತಾನೆ. ಆದರೆ ಯಥಾರ್ಥ ದೇವ , ಗುರು, ಶಾಸ್ತ್ರಗಳ ಮೇಲೆ ಶ್ರದ್ಧೆಯಿಡುತ್ತಾನೆ. ಅವನು ಜಘನ್ಯ ಅಂತರಾತ್ಮ ಇದ್ದಾನೆ.
ಪರಮಾತ್ಮ
ಯಾರು ಸರ್ವ ದೋಷಗಳಿಂದ ರಹಿತವಾದ ಶುದ್ಧ ಆತ್ಮನಿದ್ದಾನೋ ಅವನೇ ಪರಮಾತ್ಮನಿದ್ದಾನೆ. ಪ್ರತಿಯೊಂದು ಜೀವದ ಶರೀರರೂಪಿ ದೇವಾಲಯದಲ್ಲಿ ಭಗವಾನ ರೂಪೀ ಆತ್ಮನು ವಿರಾಜಮಾನನಿದ್ದಾನೆ. ಹೇಗೆ ಹಾಲಿನಲ್ಲಿ ತುಪ್ಪವಿರುವುದೋ ಅದೇ ರೀತಿಯಾಗಿ ಈ ಶರೀರದಲ್ಲಿ ಆತ್ಮನು ಇದ್ಧಾನೆ. ಆದರೆ ತುಪ್ಪವನ್ನು ಪ್ರಾಪ್ತ ಮಾಡಿಕೊಳ್ಳಬೇಕಾದರೆ ಹಾಲನ್ನು ಕಾಯಿಸಿ, ಹೆಪ್ಪು ಹಾಕಿ , ಮಜ್ಜಿಗೆ ಮಾಡಿ, ಬೆಣ್ಣೆ ತೆಗೆದು , ಕಾಯಿಸಿದಾಗ ತುಪ್ಪ ದೊರೆಯುತ್ತದೆ. ಅದೇ ರೀತಿಯಾಗಿ ಅಂತರಾತ್ಮನ ಮೂಲಕ ಸಮ್ಯಕ್ ಚಾರಿತ್ರ ತಪ ಮುಂತಾದವುಗಳ ಬಲದಿಂದ ತಮ್ಮ ಆತ್ಮನ ದೋಷಗಳನ್ನು ದೂರ ಮಾಡಿ ಅನಂತಗುಣಗಳನ್ನು ವಿಕಾಸಗಿಳಿಸಿ ಪರಮಾತ್ಮನಾಗಿ ಮಾಡಲಾಗುತ್ತದೆ. ಇದು ಜೀವದ ಸರ್ವಶ್ರೇಷ್ಠ ಅವಸ್ಥೆಯಾಗಿದೆ. ಪರಮಾತ್ಮನದೂ ಎರಡು ಅವಸ್ಥೆಗಳಿವೆ.
೧. ಸಕಲ ಪರಮಾತ್ಮ
೨. ನಿಕಲ ಪರಮಾತ್ಮ
ಸಕಲ ಪರಮಾತ್ಮ
ಯಾವ ಪರಮಾತ್ಮನು ಶರೀರ ಸಹಿತ ಇರುವನೋ ಅವನಿಗೆ ಸಕಲ ಪರಮಾತ್ಮನೆಂದು ಕರೆಯುತ್ತಾರೆ. ನಾಲ್ಕು ಘಾತೀಯ ಕರ್ಮಗಳನ್ನು ನಾಶ ಮಾಡಿದಾಗ ಅರಹಂತ ಪದದ ಪ್ರಾಪ್ತಿಯಾಗುತ್ತದೆ. ಈ ಅವಸ್ಥೆಯು ಸಕಲ ಪರಮಾತ್ಮನದಾಗಿರುತ್ತದೆ.
ನಿಕಲ ಪರಮಾತ್ಮ
ಯಾವ ಪರಮಾತ್ಮನಲ್ಲಿ ಶರೀರವಿಲ್ಲವೋ ಅವರು ನಿಕಲ ಪರಮಾತ್ಮರಿದ್ದಾರೆ. ಎಂಟೂ ಕರ್ಮಗಳನ್ನು ನಾಶ ಮಾಡಿ ಸಿದ್ಧ ಪದವಿಯನ್ನು ಪ್ರಾಪ್ತ ಮಾಡಿ ಕೊಳ್ಳಲಾಗುವುದೋ ಅವರಿಗೆ ನಿಕಲ ಪರಮಾತ್ಮರೆಂದು ಕರೆಯುತ್ತಾರೆ.